Find the Best yrqtlife Shayari, Status, Quotes from top creators only on Nojoto App. Also find trending photos & videos about
ರೇಣುಕೇಶ್ ಸದಾಶಿವಯ್ಯ
ಅವನ ಅಂತರಂಗ ಮರುಗುತಿದೆ ನಾನು ಕೇವಲ ಟೇಬಲ್, ಶೋಕೇಸ್ ಪೇಪರ್ ವೈಟ್ , ಮಕ್ಳಳ ಆಟಿಕೆಗೆ ವಸ್ತುವಾದೇನಾ ಅಂತ...... ನನ್ನ ಮೂರ್ತಿಯನ್ನ ದೇವರೆಂದು ಪೂಜಿಸುವ ಮಂದಿ ಲೋಕ ಕಂಟಕರು ಆದರು.. ನಾನು ಯಾವುದನ್ನು ಬೋಧಿಸಲಿಲ್ಲವೂ ಅದೇ ಇಂದು ವಿಜೃಂಭಿಸುತ್ತಿದೆ... ನಾನು ಯಾವ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ ಎಂದೆನೋ ಅವೆಲ್ಲಾ ಸ್ಮಶಾನಗಳಾಗಿವೆ.... ಮಮ್ಮಲ ಮರುಗುತಿದೆ ಅವನ ಆತ್ಮ....😘 #yrqtbaba #yrqtjogi #yrqtlife
ರೇಣುಕೇಶ್ ಸದಾಶಿವಯ್ಯ
ವಿಶ್ವಾಮಿತ್ರನ ತಪೊಭಂಗ ಮಾಡಿದ ಮೇನಕೆ-ವಿಶ್ವಾಮಿತ್ರರಿಂದ ಶಾಕುಂತಲ ಎಂಬ ಸಾಧ್ವಿಯ ಜನನ ನಲವತ್ತೆರಡು ದಿನಗಳ ತಪೋಭಂಗ ಮಾಡಿದ ಮದಿರೆಯಿಂದ ರಕ್ತ ಬೀಜಾಸುರರ ಉದಯ..!!! #yrquotebaba #yrqtjogi #yrqtlife
#yrquotebaba #yrqtjogi #yrqtlife
read moreರೇಣುಕೇಶ್ ಸದಾಶಿವಯ್ಯ
ಬೀಗಮುದ್ರೆ ಸಮಯದಲ್ಲಿ ರಾಜನಂತೆ ಕೆಲಸಕ್ಕೆ ಹೋಗುತ್ತಿದ್ದ ನಾನು ಬೀಗಮುದ್ರೆ ತೆರವಿನ ನಂತರ ಕೆಲಸಕ್ಕೆ ಹೋಗಲು ಯಾಕೋ ಬೇಜಾರು...!!! #yrqtjogi#yrqtbaba#yrqtlife
ರೇಣುಕೇಶ್ ಸದಾಶಿವಯ್ಯ
ಕರೋನ ಪರಿಣಾಮ ಈ ಶಹರದ ಮಂದಿ ಹೆಂಗಂದ್ರೆ ವಿಮಾನ್ದಾಗೆ ಕರೋನ ತಂದು ಊರ್ಗೆಲ್ಲಾ ಹರಡಿ ತಮ್ಮ ಶಹರದ ರಸ್ತೇನಾ ಬಂದ್ ಮಾಡ್ಕಳ್ತಾರೆ....!!🤔🤔 #yrqtjogi#yrqtbaba#yrqtlife
ರೇಣುಕೇಶ್ ಸದಾಶಿವಯ್ಯ
ಪಾನ ನಿಷೇದ ಕಾನೂನು ಜಾರಿ ಮಾಡಿ ಉದ್ಯೋಗವಕಾಶಗಳನ್ನು ಹೆಚ್ಚಿಸಿ ಎಲ್ಲಾ ರೀತಿಯ ಉಚಿತ ಯೋಜನೆಗಳ ರದ್ದು ಮಾಡಿ ಹಣ ಕೊಟ್ಟು ಕೊಳ್ಳುವ ಅಭಿಯಾನವ ಮಾಡಿ ಪ್ರತಿಯೊಂದು ಪದಾರ್ಥಕ್ಕೂ ರಸೀದಿ ಹಾಕಿಸಿ ದೇಶದ ಕಾನೂನಗಳ ಬಲ ಪಡಿಸಿ ನೇರ ತೆರಿಗೆ ಹಾಗೂ ಪರೋಕ್ಷ ತೆರಿಗೆಯ ಮೂಲಕ ಬೊಕ್ಕಸ ತುಂಬಿಸಿ ಆಡಳಿತ ನಡೆಸಿದರೆ ರಾಜ್ಯದ ಹಾಗೂ ರಾಷ್ಟ್ರದ ಸರ್ವಾಂಗ ಅಭಿವೃದ್ದಿ ಇದೇ ಸುಸಂದರ್ಭ, ದಯಮಾಡಿ "ಪಾನ ನಿಷೇಧ ಜಾರಿ" ಮಾಡಿ #yrqtjogi#yrqtbaba#yrqtlife
ರೇಣುಕೇಶ್ ಸದಾಶಿವಯ್ಯ
ನಿತ್ಯೋತ್ಸವದ ನವ್ಯ ಕವಿ ಜೋಗದ ಸಿರಿಯಲ್ಲಿ ಮುಳುಗಿದ ಬೆಣ್ಣೆ ಕದ್ದ ಕಳ್ಳ ಕೃಷ್ಣನೆಡೆಗೆ ನಡೆದ ಕುರಿಗಳು ಸಾರ್ ಕುರಿಗಳು ಎಂದು ಎಚ್ಚರಿಸಿದ ನಾಡದೇವಿಯಲ್ಲಿ ರಾಜಕೀಯ ಹೊಲಸು ಕಂಡ ಡಾ.ನಿಸಾರ್ ಅಹಮದ್ ಅವರಿಗೆ "ಭಾವಪೂರ್ಣ ಶ್ರದ್ಧಾಂಜಲಿ" #yrqtjogi#qtbaba#yrqtlife
ರೇಣುಕೇಶ್ ಸದಾಶಿವಯ್ಯ
ಕರೋನ ಪರಿಣಾಮ ಕಾಯಿಲೆ-ಕಸಾಲೆ ಬಂದಾಗ ವೈದ್ಯೋ ನಾರಾಯಣ ಸಂಕಟ ಬಂದಾಗ ವೆಂಕಟ ರಮಣ ಎಲ್ಲಾ ತುಂಬಿ ತುಳುಕುವಾಗ ನಾನೇ ರಮಣ...!!?? #yrqtjogi#yrqtbaba#yrqtlife
ರೇಣುಕೇಶ್ ಸದಾಶಿವಯ್ಯ
ಕರೋನ ಪರಿಣಾಮ ಮಂತ್ರೋದಕದಿಂದ ಕೈ ತೊಳೆಯುತ್ತಿದ್ದ ಕೈಗಳು ಮದ್ಯ(ಸಾರ)ದಿಂದ ಕೈ ತೊಳೆಯುವಂತಾಯ್ತು..!! ಯಾವುದೂ ಕನಿಷ್ಠವೂ ಅಲ್ಲ...ಹಾಗೇ... ಯಾವುದೂ ಶ್ರೇಷ್ಠವೂ ಅಲ್ಲ..... ಅನುಕೂಲಕ್ಕೆ ತಕ್ಕಂತೆ ಅದು ಶ್ರೇಷ್ಠವಾಗುತ್ತದೆ. #yrqtjogi#yrqtbaba#yrqtlife
ರೇಣುಕೇಶ್ ಸದಾಶಿವಯ್ಯ
ಕರೋನಾ ಪರಿಣಾಮ ಉದ್ಯಾನವನದ ಬೆಂಚುಗಳು ಬಸ್ ನಿಲ್ದಾಣದ ಆಸನಗಳು ಚಿತ್ರಮಂದಿರದ ರಾಜಾಸನಗಳು ಬಸ್ಸುಗಳ ಸುಖಾಸಿನಗಳು ದೇವಾಲಯದ ಸುಕನಾಸಿಗಳು ಇನ್ನೂ ಅನೇಕ ... ಪ್ರೇಮಿಗಳ ( ಕಳ್ಳ) ಪಿಸುಮಾತಿಗೆ ಕಿವಿಯಾಗಿದ್ದ ಆಸನಗಳ ಮೈಲಿಗೆ ಕಳೆದು ನಳನಳಿಸುತ್ತಿವೆ...😁😁 #yrqtjogi #yrqtbaba #yrqtlife
ರೇಣುಕೇಶ್ ಸದಾಶಿವಯ್ಯ
ಕೇಸರಿ ಧರಿಸಿ, ಕಂಚಿನ ಕಂಠದಿಂದ ವಿಶ್ವಕ್ಕೇ ಭಾರತದ ಸಂಸ್ಕೃತಿ ಪಸರಿಸಿದ ಅಂದು ಆ ನರೇಂದ್ರ ಭಾರತಕ್ಕೇ ಕೇಸರಿ ತೊಡಿಸಿ ನೂರಾಮುವತ್ತು ಕೋಟಿ ಜನರನ್ನು ಎದೆಯಲ್ಲಿ ಬಚ್ಚಿಟ್ಟು ಸಲುಹಿದ ಶ್ವೇತಧಾರಿ ಇಂದು ಈ ನರೇಂದ್ರ ನಮೋ ನಮೋ ನಮೋ ನಮಃ #yrqtjogi #yrqtbaba #yrqtlife