Nojoto: Largest Storytelling Platform

Best jeevanapayana Shayari, Status, Quotes, Stories

Find the Best jeevanapayana Shayari, Status, Quotes from top creators only on Nojoto App. Also find trending photos & videos aboutjeeva images with love quotes, shayri on jee rahe they akele with image 0, yeh jeevan hai deewani full movie with english subtitles, love jeeva, jeevan ek sanghursh hai poem in hindi,

  • 1 Followers
  • 1 Stories

Sahana~

ದ ರಾ ಬೇಂದ್ರೆ ಯವರ ಮುಂಬೈ ಜಾತಕ ಕವನ ಸ್ಪೂರ್ತಿ #yqjogi_kannada #yqjogi #machinelife #jeevanapayana #sanakannadawrittings

read more
ತುಕ್ಕು ಹಿಡಿದ ಕಿಟಕಿಯ ಸರಳ
ಸಂದಿಯಿಂದೆಲ್ಲೋ, 
ಸೂರ್ಯನ ಕಿರಣ ಮೈಯ ತಾಗಿ,
ರಸ್ಟು ಹಿಡಿದ ಕಬ್ಬಿಣದ ಮಂಚದ
ಮೇಲೆ ಮಗುವಂತೆ ಮಲಗಿದ್ದ 
ಅವನು,ಬೆಳಗಾಯಿತು ಎಂದು ಅರಿತು,
ನಿದ್ದೆಯ ಜೊಂಪು ತಲೆಯ ಆವರಿಸಿರಲು,
ದಣಿದ  ಕಂಗಳು ಜಗವ  
ನೋಡಲು ಅನುಮತಿ ನೀಡಿದಿರಲು,
ದಿನದ ಕಾಯಕವ ನೆನೆದು ;
ಹಾಸಿಗೆಯಿಂದ ದೇಹವನೆಳೆದು;
ಕೊರೆವ ಚಳಿಯಲಿ  ನಾಲ್ಕು
ಸೌದೆಯ ಸುರಿದು ಗಾಳಿಯ ಕಣ್ತಪ್ಪಿಸಿ
ಕಡ್ಡಿಯ ಗೀರಿ, ಒಲೆಯ ಊದಿ;
ನೀರ ಬಿಸಿಗೊಳಿಸಿ, ಸುಡುವ ಉದಕದಿ
ಮೈಯ ಕೊಳೆಯ ತೊಳೆದು,
ಶರಟು ಪ್ಯಾಂಟಿನೊಳಗೆ ದೇಹವ ತುರುಕಿ,
ಕಂಕುಳಲ್ಲಿ ಒಂದು ಬ್ಯಾಗಿರಿಸಿ,
ಅಲ್ಲೆಲ್ಲೋ ಯಾವುದೋ ಉಪಹಾರ 
ಮಂದಿರದಿ ಎರಡು ದೋಸೆಯ ಮುರಿದು
ಬಾಯೊಳಿರಿಸಿ, ಕೈಯ ಗಡಿಯಾರವು 
ತಿಳಿಸೆ ಸಮಯ ಓಡುತಿಹದೆಂದು,
ತಂಬಿಗೆಯ ನೀರ ಕುಡಿದು 
ಗಂಟಲ ಸರಿಗೊಳಿಸಿ, ಮೇಲೆದ್ದು ಕಾಲ್ಕಿತ್ತು,
ಓಡುತೋಡುತ ಜನರ ಗುಂಪಿನ
ನಡುವೆ ಮರೆಯಾದ ನೋಡಿ ಮಾನವ.





 ದ ರಾ ಬೇಂದ್ರೆ ಯವರ ಮುಂಬೈ ಜಾತಕ ಕವನ ಸ್ಪೂರ್ತಿ

#yqjogi_kannada 
#yqjogi 
#machinelife 
#jeevanapayana 
#sanakannadawrittings

Follow us on social media:

For Best Experience, Download Nojoto

Home
Explore
Events
Notification
Profile