Nojoto: Largest Storytelling Platform
anandhegde7062
  • 23Stories
  • 3Followers
  • 227Love
    3.4KViews

Anand Hegde

ಮಾತಿನೂರಿನ ಮೌನಿ!

  • Popular
  • Latest
  • Video
d90126cff006ca0e6ae3c1336a172aaa

Anand Hegde

ಮತ್ತೆ ಅಪರಿಚಿತರಾಗಿಯೇ
ಭೇಟಿಯಾಗಬೇಕಿದೆ ನಾವು;
ಮೊದಮೊದಲ ಭೇಟಿಗಳ ಹಾಗೇ!
ಮತ್ತೆ ಪರಿಚಯ ಹೇಳಬೇಕು,
ಮತ್ತೆ ಕುಶಲೋಪರಿ ಕೇಳಬೇಕು,
ಮತ್ತೆ ಹೊಸತಾಗಿ ಗೆಳೆತನ ಮಾಡಬೇಕು,
ಎಲ್ಲವೂ ಥೇಟು ಮೊದಲಿನ ಹಾಗೇ!
ಹೊಸತಾಗಿ ಅದೇ ಸುದ್ದಿಗಳ ಹೇಳಬೇಕು,
ಅದದೇ ಹಾಡುಗಳ ಮರಳಿ ಕೇಳಬೇಕು,
ಅದೇ ಸಿನಿಮಾಗಳ ಒಟ್ಟಿಗೇ ನೋಡಬೇಕು,
ಎಲ್ಲವೂ ಥೇಟು ಮೊದಲಿನ ಹಾಗೇ!
ಕಾದಂಬರಿಗಳೆಲ್ಲವ ಬೆರಗಲ್ಲಿ ಓದಬೇಕು,
ಗಂಟೆಗಟ್ಟಲೆ ಕವಿತೆಯಾ ಕುರಿತು ಮಾತಾಡಬೇಕು,
ಮೌನದಲೂ ಮಾತುಗಳ ಹುಡುಕಬೇಕು,
ಎಲ್ಲವೂ ಥೇಟು ಮೊದಲಿನ ಹಾಗೇ!
ಒಂದೇ ಬೆಂಚಲಿ ಕೂತು ಹರಟಬೇಕು,
ಅರೆಘಳಿಗೆಯ ದಾರಿಯನು ತಾಸೊತ್ತು ನಡೆಯಬೇಕು,
ನಗಬೇಕು, ಅಳಬೇಕು, ಹುಸಿಮುನಿಸು ತೋರಬೇಕು,
ಎಲ್ಲವೂ ಥೇಟು ಮೊದಲಿನ ಹಾಗೇ!
ಇಷ್ಟೆಲ್ಲ ಬೇಕುಗಳು ಸಿಗಬೇಕಾದರೆ,
ನಿನ್ನೆಗಳೆಲ್ಲ ಮರಳಿ ನಮ್ಮ ಬಳಿ ಬರಬೇಕು!
ನಾವಿಬ್ಬರೂ ಮತ್ತೆ ಅಪರಿಚಿತರಾಗಿ ಭೇಟಿಯಾಗಬೇಕು!
ಥೇಟು ಮೊದಲಿನ ಹಾಗೆಯೇ!



ಜನ್ಮದಿನದ ಹಾರ್ದಿಕ ಶುಭಾಶಯಗಳು ಶ್ರೀ..

©Anand Hegde #Likho
d90126cff006ca0e6ae3c1336a172aaa

Anand Hegde

ನಿನ್ನ ನೆನಪುಗಳು ಇರುವೆಡೆಯಲ್ಲೇ
ಇದೆ ನೋಡು ನನ್ನ ಬಿಡಾರ!
ನಿನ್ನ ಜ್ಞಾಪಕ ಮಾತ್ರದಿಂದಲೇ
ತುಟಿಯಂಚಲಿ ನಗುವೊಂದು ಮೂಡಿದೆ,
ನೀನೆಂದರೇನೆ ಒಂದು ಸಡಗರ!

©Anand Hegde
  #ಸಡಗರ #snowfall #ನೆನಪು #ಕನ್ನಡ_ಬರಹಗಳು #ಕನ್ನಡ #ಪ್ರೀತಿ #love #Memories #poem #Happiness

#ಸಡಗರ snowfall #ನೆನಪು #ಕನ್ನಡ_ಬರಹಗಳು #ಕನ್ನಡ #ಪ್ರೀತಿ love Memories poem Happiness

d90126cff006ca0e6ae3c1336a172aaa

Anand Hegde

ಸಂಜೆಯ ಸೆರಗಲ್ಲಿ ಕುಳಿತು,
ನಿನ್ನ ಮಾತುಗಳ ಆಲಿಸಿದರೆ
ಅದುವೇ ದಿವ್ಯಸಂಗೀತ!
ಪಿಸುಮಾತುಗಳೆಲ್ಲ
ರೆಕ್ಕೆ ಬಿಚ್ಚಿ ಹಾರಾಡುವಾಗ,
ನಿಟ್ಟುಸಿರೂ ಸಹ ಜೀವಂತ!!

©Anand Hegde
  #ಜೀವಂತ #loveshayari #ಕನ್ನಡ_ಬರಹಗಳು #ಕನ್ನಡ #poem #Poet #love #feeelings #music #ಪ್ರೀತಿ

#ಜೀವಂತ loveshayari #ಕನ್ನಡ_ಬರಹಗಳು #ಕನ್ನಡ poem Poet love feeelings music #ಪ್ರೀತಿ

d90126cff006ca0e6ae3c1336a172aaa

Anand Hegde

ಬೇಕಂತಲೇ ಸತಾಯಿಸು
ನೀ ನನ್ನ ಕೈಗೆ ಸಿಗದೆ!
ಮತ್ತೆ ಮತ್ತೆ ಒಲವಿಗೆ ಬೀಳುತ್ತೇನೆ,
ಇದೇ ಮೊದಲೆಂಬಂತೆ ನಿನ್ನೆಡೆ!

©Anand Hegde
  #ಒಲವು #humantouch #ಕನ್ನಡ_ಬರಹಗಳು #ಕನ್ನಡ #ಕವಿತೆ #poem #love #life #Poet #poetry

#ಒಲವು #humantouch #ಕನ್ನಡ_ಬರಹಗಳು #ಕನ್ನಡ #ಕವಿತೆ #poem love life #Poet poetry #ಪ್ರೀತಿ

d90126cff006ca0e6ae3c1336a172aaa

Anand Hegde

ನಿನ್ನ ಬದುಕಿನ ಯಾವುದೋ ಒಂದು
ಅಧ್ಯಾಯವಾಗಿ ಉಳಿದುಬಿಡುವ ಆಸೆಯಾಗಿದೆ!
ಕಣ್ಣೆದುರಂತೂ ನಿನ್ನ ದಿಟ್ಟಿಸಲಾಗದ ನಾನು,
ಬೆರಗುಗಣ್ಣಲ್ಲಿ ನೀ ನನ್ನ ಓದುವಾಗಲಾದರೂ ಕಣ್ತುಂಬಿಕೊಳ್ಳುತ್ತೇನೆ ದೃಷ್ಟಿ ಕದಲಿಸದೇ!!

©Anand Hegde #ಅಧ್ಯಾಯ #kitaabein #ಕನ್ನಡ #ಕನ್ನಡ_ಬರಹಗಳು #ಪ್ರೀತಿ #poem #love #Books #Mobbhat #Memories

#ಅಧ್ಯಾಯ kitaabein #ಕನ್ನಡ #ಕನ್ನಡ_ಬರಹಗಳು #ಪ್ರೀತಿ poem love Books Mobbhat Memories

d90126cff006ca0e6ae3c1336a172aaa

Anand Hegde

ನಿನ್ನಷ್ಟೇ, ನಿನ್ನೂರಿನ ದಾರಿಯೂ
ಜ್ಞಾಪಕವಾಗುತ್ತದೆ ನನಗೆ!
ಯಾಕೆಂದರೆ ಆ ಹಾದಿಯ ಇಕ್ಕೆಲಗಳಲ್ಲಿ
ಈಗಲೂ ಕೇಳಿಸುತ್ತದೆ ನಿನ್ನಯ ಹೂನಗೆ!!

©Anand Hegde
  #ಹೂನಗೆ #WalkingInWoods #ಕನ್ನಡ_ಬರಹಗಳು #ಕನ್ನಡ #poem #love #Memories #poetcommunity #ಪ್ರೀತಿ

#ಹೂನಗೆ WalkingInWoods #ಕನ್ನಡ_ಬರಹಗಳು #ಕನ್ನಡ poem love Memories poetcommunity #ಪ್ರೀತಿ

d90126cff006ca0e6ae3c1336a172aaa

Anand Hegde

ಕನಸುಗಳಿಗೆ ಸೀಮೆಗಳಿಲ್ಲ;
ಅವು ರಾತ್ರಿಯ ಕತ್ತಲಿನಷ್ಟೇ ಅನಂತ!
ಅರೆಘಳಿಗೆಯ ಕನಸಿಗೆ ಜೀವ ತುಂಬಲು,
ಸೆಣಸಬೇಕು ಜೀವನಪರ್ಯಂತ!!

©Anand Hegde
  #ಸೆಣಸಾಟ #ಕನಸು #ಕನ್ನಡ_ಬರಹಗಳು #ಕನ್ನಡ #life #poem #Dreams #oneliner #Goals ##ಕವಿತೆ

#ಸೆಣಸಾಟ #ಕನಸು #ಕನ್ನಡ_ಬರಹಗಳು #ಕನ್ನಡ life #poem #Dreams #oneliner #Goals ##ಕವಿತೆ #ಜೀವನ

d90126cff006ca0e6ae3c1336a172aaa

Anand Hegde

ಅವಳೊಂದಿಗೆ ಕಳೆದ ಒಂದು ಕ್ಷಣವೇ
ಯುಗವಾಗಿ ಬಿಡಲಿ!
ಕಾಲವೇ ನೀನೊಂಚೂರು ನಿಲ್ಲು,
ಅವಳೊಟ್ಟಿಗಿನ ಚಿತ್ರ ಮನದಲ್ಲಿ ಸೆರೆಯಾಗಲಿ!

©Anand Hegde
  #ಯುಗ  #HumptyKavya #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕವಿತೆ #love #Time #Feel #Poet

#ಯುಗ #HumptyKavya #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕವಿತೆ love #Time #Feel #Poet #ಪ್ರೀತಿ

d90126cff006ca0e6ae3c1336a172aaa

Anand Hegde

ಹೀಗೆಯೇ ಇದ್ದು ಬಿಡೋಣ,
ಹಾಡೊಂದು ಮುಗಿಯುವವರೆಗೆ!
ದೇವರೇ.. ವರವೊಂದ ಕೊಡು,
ಈ ಹಾಡು ಮುಗಿಯದ ಹಾಗೇ!

©Anand Hegde
  
#ಹಾಡು #SongOfLove #ಕನ್ನಡ_ಬರಹಗಳು #ಕನ್ನಡಕವಿತೆ #love #poem #feel_the_love #kannadaquotes

#ಹಾಡು #SongOfLove #ಕನ್ನಡ_ಬರಹಗಳು #ಕನ್ನಡಕವಿತೆ love #poem #feel_the_love #kannadaquotes #ಪ್ರೀತಿ

d90126cff006ca0e6ae3c1336a172aaa

Anand Hegde

ಏಕಾಂತದ ಸಂಜೆಗಳಲ್ಲಿ ಕೂತು,
ಬರಿ ನಿನ್ನನ್ನೇ ಧ್ಯಾನಿಸುತ್ತೇನೆ!
ಪ್ರೀತಿಯ ಸಂಗಡ ವಿರಹವೂ ಉಚಿತವೆಂದು
ಹಲವರು ಈ ಮೊದಲೇ ಹೇಳಿದ್ದಾರೆ ನನಗೆ!!

©Anand Hegde
  #ವಿರಹ #bekhudi #ಕನ್ನಡ_ಬರಹಗಳು #ಕನ್ನಡ #love #feeelings #heartbroken💔feel #Poet

#ವಿರಹ #bekhudi #ಕನ್ನಡ_ಬರಹಗಳು #ಕನ್ನಡ love #feeelings heartbroken💔feel #Poet #ಪ್ರೀತಿ

loader
Home
Explore
Events
Notification
Profile