Nojoto: Largest Storytelling Platform
nojotouser4325006820
  • 1.8KStories
  • 20Followers
  • 65Love
    414Views

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ಮನಸಿನ ಭಾವನೆಗಳ ದಾಖಲಿಸುವ ಭಾವಜೀವಿ.

  • Popular
  • Latest
  • Video
7a31a45bf4b8e663702e0feb93df9c8c

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#jaishreekrishna
7a31a45bf4b8e663702e0feb93df9c8c

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ದೇವರ ಲೆಕ್ಕದಿ ನಾವೆಲ್ಲ
ಬರಿಯ ಆಟದ ಬೊಂಬೆಗಳು
ಅವ ನೀಡಿದ ಕಷ್ಟಗಳ ಸಹಿಸಿ
ಅರಳಿದ ಬಾಡಿದ ಹೂಗಳು

ಹೆಜ್ಜೆ ಹೆಜ್ಜೆಗೂ ಅವನು
ನೀಡುವನು ಕಷ್ಟಗಳ ಸರಮಾಲೆ
ಅಂಜದೆ ಅಳುಕದೆ ಎದುರಿಸಲು
ದಕ್ಕುವುದವನ ಕೃಪೆಯ ಹೂಮಾಲೆ

ಸಹಿಸುವ ನಮ್ಮ ಆತ್ಮಸ್ಥೈರ್ಯಕೆ
ಅವನೀಯುವ ಪರೀಕ್ಷೆಗಳೇ ಪ್ರೇರಣೆ
ಅವನ ನಿರೀಕ್ಷೆಯ ಫಲಿತಾಂಶ ಬರಲು
ಆಗಲೇ ಬದುಕಲಿ ಸಿಕ್ಕುವುದು ಮನ್ನಣೆ

ಎದೆಗುಂದದಿರು ಓ ಜೀವವೇ
ನಿನ್ನ ಬೆಂಬಲಕಿಹುದು ಆ ದೈವವೇ
ಎಂದೆಂದಿಗೂ ನಿನ್ನಲಿರಲಿ ಆತ್ಮವಿಶ್ವಾಸ
ಆ ಭರವಸೆಯ ಬೆಳಕೀಯುವುದು ಸಂತಸ

ಹೋರಾಟದ ಈ ಬದುಕಿಗೆ
ಸಂಕಷ್ಟಗಳೇ ಗಟ್ಟಿಗೊಳಿಸೋ ಸಾಧನ
ಅಪ್ಪಟ ಆನಂದಕೆ ಅದಾಗುವುದು
ಸಂತೃಪ್ತಿಯ ಜೀವನ

೧೦೦೪ಪಿಎಂ೦೪೦೩೨೦೨೩
*ಅಮುಭಾವಜೀವಿ ಮುಸ್ಟೂರು*

©ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ 
  ದೇವರ ಲೆಕ್ಕದಿ ನಾವೆಲ್ಲ
ಬರಿಯ ಆಟದ ಬೊಂಬೆಗಳು
ಅವ ನೀಡಿದ ಕಷ್ಟಗಳ ಸಹಿಸಿ
ಅರಳಿದ ಬಾಡಿದ ಹೂಗಳು

ಹೆಜ್ಜೆ ಹೆಜ್ಜೆಗೂ ಅವನು
ನೀಡುವನು ಕಷ್ಟಗಳ ಸರಮಾಲೆ
ಅಂಜದೆ ಅಳುಕದೆ ಎದುರಿಸಲು

ದೇವರ ಲೆಕ್ಕದಿ ನಾವೆಲ್ಲ ಬರಿಯ ಆಟದ ಬೊಂಬೆಗಳು ಅವ ನೀಡಿದ ಕಷ್ಟಗಳ ಸಹಿಸಿ ಅರಳಿದ ಬಾಡಿದ ಹೂಗಳು ಹೆಜ್ಜೆ ಹೆಜ್ಜೆಗೂ ಅವನು ನೀಡುವನು ಕಷ್ಟಗಳ ಸರಮಾಲೆ ಅಂಜದೆ ಅಳುಕದೆ ಎದುರಿಸಲು #ಪ್ರೇರಕ

7a31a45bf4b8e663702e0feb93df9c8c

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ಮಂಜು ಮುಸುಕಿದ ಮುಂಜಾನೆ 
ತಂದಿದೆ ಮನದಲಿ ಸದ್ಭಾವನೆ
ಹಸಿರ ತೇರಿನಲಿ ಹೊರಟ
ಬಿರಿದ ಮೊಗ್ಗಲಿ ಹೊಮ್ಮುವ ಸುವಾಸನೆ

ಕತ್ತಲೆ ಕಳೆದು ಬೆಳಕು ಮೂಡುವಾಗ
ಹೊಮ್ಮಿದೆ ಹಕ್ಕಿಗಳ ಸುಮಧುರ ರಾಗ
ಜುಳು ಜುಳು ಸಲಿಲಿದ ಸಂಗೀತ
ಆನಂದವ ಉಣಪಡಿಸಿದೆ ಜಗಕ್ಕೀಗ

ಸೂರ್ಯ ರಶ್ಮಿಯ ಹೊನ್ನ ಕಿರಣ
ನವ ಪಲ್ಲವಕೆ ಶುಭ ಕಾರಣ
ಉದಯಕಾಲದ ಪರಿಶುದ್ಧ ಭಾವಕೆ
ಪ್ರಕೃತಿಯ ಈ ಸೊಬಗೆ ಸ್ಪೂರ್ತಿ ಸ್ಪುರಣ

ನಿಷ್ಕಲ್ಮಶ ನಿಶ್ಚಿಂತ ನಿಮಿಷ
ಮನಕೆ ತಂದಿದೆ ಸಂತೋಷ
ತಣಿದ ಜೀವಗಳ ತಣಿಸಿದ
ಶುಭೋದಯದ ಈ ಸತ್ಯ ಸಂದೇಶ

ಸವಿಯಲಿದುವೆ ಸ್ವರ್ಗ ಸದೃಶ
ಮೈ ಮುರಿಯುತೆದ್ದಿದೆ ನವ ದಿಶ
ನಾವೋನ್ಮೇಷ ಶಾಲಿನಿ ನಿಸರ್ಗ
ಎದ್ದೇಳಿ ಸಾಕು ನೀಡಿದೆ ಆದೇಶ

೦೬೫೧ಎಎಂ೨೨೧೧೨೦೨೨
*ಅಮು ಭಾವಜೀವಿ ಮುಸ್ಟೂರು* #ಅಮುಭಾವರಸಾಯನ ೪೮

ಮಂಜು ಮುಸುಕಿದ ಮುಂಜಾನೆ 
ತಂದಿದೆ ಮನದಲಿ ಸದ್ಭಾವನೆ
ಹಸಿರ ತೇರಿನಲಿ ಹೊರಟ
ಬಿರಿದ ಮೊಗ್ಗಲಿ ಹೊಮ್ಮುವ ಸುವಾಸನೆ

ಕತ್ತಲೆ ಕಳೆದು ಬೆಳಕು ಮೂಡುವಾಗ

#ಅಮುಭಾವರಸಾಯನ ೪೮ ಮಂಜು ಮುಸುಕಿದ ಮುಂಜಾನೆ ತಂದಿದೆ ಮನದಲಿ ಸದ್ಭಾವನೆ ಹಸಿರ ತೇರಿನಲಿ ಹೊರಟ ಬಿರಿದ ಮೊಗ್ಗಲಿ ಹೊಮ್ಮುವ ಸುವಾಸನೆ ಕತ್ತಲೆ ಕಳೆದು ಬೆಳಕು ಮೂಡುವಾಗ

7a31a45bf4b8e663702e0feb93df9c8c

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ಯೌವನದ ರಂಗು ಬಂದಿದೆ 
ಈಗ ಪಡುವಣದಾ ದಿಗಂತಕೆ
ಇರುಳು ಇನ್ನೇನು  ಆವರಿಸುವುದು
ಅದೇ ಕಾರಣ ಮರಳುವ ಧಾವಂತಕೆ
ಧರೆಯ ಮುತ್ತುವ ಮೊದಲು 
ಗೂಡು ಸೇರಿ  ಆಹ್ವಾನಿಸಿ ಕತ್ತಲು

ದಣಿದ ದಿನಕರ ಪವಡಿಸುವನು 
ಭೂತಾಯ ಮಡಿಲಲ್ಲಿ  ವಿರಮಿಸಿ
ಚುಕ್ಕಿ ತಾರೆಯ ಮಿನುಗು ಜೋಗುಳ
ಹಾಡುತ್ತಿದ್ದವು ಸಂಭ್ರಮಿಸಿ
ಬಂದ ಚಂದಿರ ಬೆಳದಿಂಗಳ ಹಾಸಿ
ರವಿಯ ದಣಿವ ನಿವಾರಿಸಿ

ಸಂಜೆಗೆಂಪಿನ ನಭದ ಪಲ್ಲಂಗವು
ನವಭಾವವ ವಿರಚಿಸಿತು
ಇರುಳ ಹೊದ್ದು ಮಲಗೋ ಭೂಮಿಯ
ಸವಿಗನಸ ಕಾಣಲು ಕಳುಸಿತು
ತಂಪು ಕಂಪಿಗೆ ಜೋಂಪು ಹತ್ತಿ
ಇಳೆ ಸವಿನಿದ್ರೆಗೆ ಜಾರಿತು

0542ಪಿಎಂ211116
*ಅಮುಭಾವಜೀವಿ ಮುಸ್ಟೂರು* #ಅಮುಭಾವರಸಾಯನ ೪೭
ಯೌವನದ ರಂಗು ಬಂದಿದೆ 
ಈಗ ಪಡುವಣದಾ ದಿಗಂತಕೆ
ಇರುಳು ಇನ್ನೇನು  ಆವರಿಸುವುದು
ಅದೇ ಕಾರಣ ಮರಳುವ ಧಾವಂತಕೆ
ಧರೆಯ ಮುತ್ತುವ ಮೊದಲು 
ಗೂಡು ಸೇರಿ  ಆಹ್ವಾನಿಸಿ ಕತ್ತಲು

#ಅಮುಭಾವರಸಾಯನ ೪೭ ಯೌವನದ ರಂಗು ಬಂದಿದೆ ಈಗ ಪಡುವಣದಾ ದಿಗಂತಕೆ ಇರುಳು ಇನ್ನೇನು ಆವರಿಸುವುದು ಅದೇ ಕಾರಣ ಮರಳುವ ಧಾವಂತಕೆ ಧರೆಯ ಮುತ್ತುವ ಮೊದಲು ಗೂಡು ಸೇರಿ ಆಹ್ವಾನಿಸಿ ಕತ್ತಲು

7a31a45bf4b8e663702e0feb93df9c8c

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ಪಂಥೀಯ ಭೇದ ನನಗೇಕೆ
ನಾ ಬಂದಿಹೆ ಸಹಪಂಕ್ತಿ ಭೋಜನ ಮಾಡೋಕೆ  
ಯೋಚನೆಗಳಾಚೆಗೆ ಬದುಕಬೇಕು
ನಾ ಸಮಾಜದೊಳಗೆ ಇರಬೇಕು  
ಅವನೂ ಬೇಕು ಇವನೂ ಬೇಕು 
ಮೊದಲು ನಾನು ನಾನಾಗಿರಬೇಕು 
ಎಡಗಡೆ ಬಂಧು ಬಲಗಡೆ ಗೆಳೆಯ 
ಎರಡರ ನೋಟ ಒಂದಾಗದೇ ಪ್ರಳಯ 
ಕರಿಯನಲ್ಲ ನಾನು ಬಿಳಿಯನಲ್ಲ
ಮೊದಲು ಮಾನವನಾಗಬೇಕು ನಾನು 
ಸ್ಪೃಶ್ಯನೋ ಅಸ್ಪೃಶ್ಯನೋ
ಈ ತಾರತಮ್ಯ ನಿಲ್ಲಲೇಬೇಕು 
ನಡೆವ ದಾರಿಗೆ ಕಾಲೇ ಮುಖ್ಯ 
ಅರಿತು ನಡೆಯೆ ಸೌಖ್ಯ
ಎಡಬಲದ ಹಂಗೇಕೆ
ಬಂದು ಬದುಕಿ ಹೋಗೋಕೆ
ಗುಡಿ ಗೋಪುರವಿರಲಿ
ಚರ್ಚು ಮಸೀದಿಯ ಇರಲಿ
ನಂಬಿಕೆಯಲಿ ದೇವರು ಒಬ್ಬನೇ 
ದಾರಿ ಬೇರೆಯಾದರೂ ಒಂದೇ ಚಿಂತನೆ
ನನಗಿಲ್ಲ  ಅವರವರ ಪಂಥೀಯ ಗೀಳು
ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು 
ಇದೇ ನನ್ನ ಬದುಕಿನ ತಿರುಳು
ಅದನುಳಿದೆಲ್ಲಾ ಮರುಳು
0924ಪಿಎಂ111116
ಅಮುಭಾವಜೀವಿ #ಅಮುಭಾವರಸಾಯನ ೪೬

ಪಂಥೀಯ ಭೇದ ನನಗೇಕೆ
ನಾ ಬಂದಿಹೆ ಸಹಪಂಕ್ತಿ ಭೋಜನ ಮಾಡೋಕೆ  
ಯೋಚನೆಗಳಾಚೆಗೆ ಬದುಕಬೇಕು
ನಾ ಸಮಾಜದೊಳಗೆ ಇರಬೇಕು  

ಅವನೂ ಬೇಕು ಇವನೂ ಬೇಕು

#ಅಮುಭಾವರಸಾಯನ ೪೬ ಪಂಥೀಯ ಭೇದ ನನಗೇಕೆ ನಾ ಬಂದಿಹೆ ಸಹಪಂಕ್ತಿ ಭೋಜನ ಮಾಡೋಕೆ ಯೋಚನೆಗಳಾಚೆಗೆ ಬದುಕಬೇಕು ನಾ ಸಮಾಜದೊಳಗೆ ಇರಬೇಕು ಅವನೂ ಬೇಕು ಇವನೂ ಬೇಕು

7a31a45bf4b8e663702e0feb93df9c8c

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ಕಣ್ಣು ತೆರೆದು ನೋಡು
ನಮ್ಮ ಈ ಪಾಡು
ಕಷ್ಟಗಳೇ ಹಾಸಿ ಹೊದ್ದಿವೆ
ಸುಖವಂತು ಪಾಲಿಗಿಲ್ಲ
ಮೂಕನಾಗಿ ಎಲ್ಲ ಸಹಿಸಿ ಕಾಯುತಿರುವೆ
ನಾಳೆಯ ಕುಂದದ ಭರವಸೆಯೊಂದಿಗೆ
ಬಿದ್ದು ಎದ್ದೇಳುವೆ ಸೋಲೊಪ್ಪದೆ
ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿ
ಆಡಿಕೊಳ್ಳುವವರ ಮಾತಿಗೆ ಕಿವುಡಾಗಿ
ದುಡಿಮೆಯನೊಂದ ನಂಬಿ ಹೊರಟಿರುವೆ
ಕೈ ಹಿಡಿದು ನಡೆಸು ಸಾಕು

೦೮೧೫ಪಿಎಂ೧೪೧೧೨೦೨೨
*ಅಮು ಭಾವಜೀವಿ ಮುಸ್ಟೂರು*
 #ಅಮುಭಾವರಸಾಯನ ೪೫

ಕಣ್ಣು ತೆರೆದು ನೋಡು
ನಮ್ಮ ಈ ಪಾಡು
ಕಷ್ಟಗಳೇ ಹಾಸಿ ಹೊದ್ದಿವೆ
ಸುಖವಂತು ಪಾಲಿಗಿಲ್ಲ
ಮೂಕನಾಗಿ ಎಲ್ಲ ಸಹಿಸಿ ಕಾಯುತಿರುವೆ
ನಾಳೆಯ ಕುಂದದ ಭರವಸೆಯೊಂದಿಗೆ

#ಅಮುಭಾವರಸಾಯನ ೪೫ ಕಣ್ಣು ತೆರೆದು ನೋಡು ನಮ್ಮ ಈ ಪಾಡು ಕಷ್ಟಗಳೇ ಹಾಸಿ ಹೊದ್ದಿವೆ ಸುಖವಂತು ಪಾಲಿಗಿಲ್ಲ ಮೂಕನಾಗಿ ಎಲ್ಲ ಸಹಿಸಿ ಕಾಯುತಿರುವೆ ನಾಳೆಯ ಕುಂದದ ಭರವಸೆಯೊಂದಿಗೆ

7a31a45bf4b8e663702e0feb93df9c8c

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ


ನಿನ್ನ ನಗುವು ಮಗುವಿನಂತೆ
ನಿನ್ನ ವದನ ಚಂದ್ರನಂತೆ
ನಿನ್ನ ಮಾತು ಕೋಗಿಲೆ ದನಿಯಂತೆ
ನಿನ್ನ ಚೆಲುವು ಹುಣ್ಣಿಮೆಯಂತೆ
ನನಗಾಗಿ ಬಂದೆ ದೇವತೆ ನೀನು
ನಿನ್ನ ಸದಾ ಧ್ಯಾನಿಸುವ ಭಕ್ತ ನಾನು

1259ಪಿಎಂ07112022
*ಅಮುಭಾವಜೀವಿ ಮುಸ್ಟೂರು*
 #ಅಮುಭಾವರಸಾಯನ ೪೪

ನಿನ್ನ ನಗುವು ಮಗುವಿನಂತೆ
ನಿನ್ನ ವದನ ಚಂದ್ರನಂತೆ
ನಿನ್ನ ಮಾತು ಕೋಗಿಲೆ ದನಿಯಂತೆ
ನಿನ್ನ ಚೆಲುವು ಹುಣ್ಣಿಮೆಯಂತೆ
ನನಗಾಗಿ ಬಂದೆ ದೇವತೆ ನೀನು
ನಿನ್ನ ಸದಾ ಧ್ಯಾನಿಸುವ ಭಕ್ತ ನಾನು

#ಅಮುಭಾವರಸಾಯನ ೪೪ ನಿನ್ನ ನಗುವು ಮಗುವಿನಂತೆ ನಿನ್ನ ವದನ ಚಂದ್ರನಂತೆ ನಿನ್ನ ಮಾತು ಕೋಗಿಲೆ ದನಿಯಂತೆ ನಿನ್ನ ಚೆಲುವು ಹುಣ್ಣಿಮೆಯಂತೆ ನನಗಾಗಿ ಬಂದೆ ದೇವತೆ ನೀನು ನಿನ್ನ ಸದಾ ಧ್ಯಾನಿಸುವ ಭಕ್ತ ನಾನು

7a31a45bf4b8e663702e0feb93df9c8c

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ಕನ್ನಡ ನನ್ನುಸಿರು
ಕರುನಾಡು ನನ್ನ ಹೆಸರು
ಪ್ರೀತಿ ಕೊಟ್ಟ ನಾಡಿಗೆ
ಜೀವ ಕೊಡುವೆ ಭಾಷೆಗೆ
ತಾಯ ಗರ್ಭದಿಂದ ಬಂದ
ತಾಯ್ನುಡಿಯ ನಂಟಿದು
ಉಸಿರಿರುವ ತನಕ ಜೊತೆ ಬರುವ
ಅಕ್ಷರದನುಬಂಧವಿದು
ಕಬ್ಬಿಗರೆದೆಯಲಿ ಬಿದ್ದ ಭಾವ
ಅಕ್ಕರದ ರೆಕ್ಕೆ ಬಿಚ್ಚಿ ಹಾರಿದೆ
ನಾಡು ನುಡಿಯ ನಲುಮೆ ಸಿರಿಯ
ಧಾರೆಯೆರೆದು ನನ್ನ ಸೇರಿದೆ
ಕೆಂಪು ಹಳದಿ ತೊಟ್ಟು
ಅಭಿಮಾನದಿ ಹಾರಾಡುವೆ
ಭಾಷೆಗಾಗಿ ಎಂದೆಂದಿಗೂ
ಈ ಜೀವನ ಮುಡಿಪಿಡುವೆ
ಹರಸು ತಾಯಿ ಭುವನೇಶ್ವರಿ
ಕುವರ ನಾ ತೋರು ಸರಿದಾರಿ
ಸಿರಿಗನ್ನಡ ನುಡಿಯಲಿ ನಾಲಿಗೆ
ಸಿರಿ ತುಂಬಲಿ ನನ್ನೀ ನಾಡಿಗೆ

೦೪೦೩ಪಿಎಂ೦೫೧೧೨೦೨೨
*ಅಮುಭಾವಜೀವಿ ಮುಸ್ಟೂರು* #ಅಮುಭಾವರಸಾಯನ ೪೪

ಕನ್ನಡ ನನ್ನುಸಿರು
ಕರುನಾಡು ನನ್ನ ಹೆಸರು
ಪ್ರೀತಿ ಕೊಟ್ಟ ನಾಡಿಗೆ
ಜೀವ ಕೊಡುವೆ ಭಾಷೆಗೆ

ತಾಯ ಗರ್ಭದಿಂದ ಬಂದ

#ಅಮುಭಾವರಸಾಯನ ೪೪ ಕನ್ನಡ ನನ್ನುಸಿರು ಕರುನಾಡು ನನ್ನ ಹೆಸರು ಪ್ರೀತಿ ಕೊಟ್ಟ ನಾಡಿಗೆ ಜೀವ ಕೊಡುವೆ ಭಾಷೆಗೆ ತಾಯ ಗರ್ಭದಿಂದ ಬಂದ

7a31a45bf4b8e663702e0feb93df9c8c

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ತಿರಸ್ಕಾರಕ್ಕೆ ಕುಗ್ಗದಿರು
ಪುರಸ್ಕಾರಕ್ಕದು ಮೊದಲ ಮೆಟ್ಟಿಲು
ಅವಹೇಳನಕ್ಕೆ ಅಂಜದಿರು
ಅಭಿಮಾನಕ್ಕೆ ಅದೇ ತೊಟ್ಟಿಲು 
ಅವಮಾನಕ್ಕೆ  ಅಧೀರನಾಗದಿರು
ಅವಕಾಶಕೆ ಅದುವೇ ಬೆಂಬಲ 
ಸೋಲಿಗೆ ಎಂದು ಕಂಗಾಲಾಗದಿರು
ಗೆಲುವಿಗೆ ಇಂದೇ ಕಂಕಣ ತೊಡು 
ಇಲ್ಲಿ ಯಾರಿಗೂ ಯಾರಿಲ್ಲ 
ನಿನ್ನ ಬದುಕು ನಿನ್ನದೇ ಮುನ್ನಡೆ
ಅನಿವಾರ್ಯತೆ  ಇದ್ದರೆ ನೆನೆವರು
ಅವಶ್ಯಕತೆ ಮುಗಿಯಲು ಮರೆವರು
ಅದಕೆಲ್ಲ  ಎದೆಗುಂದದೆ ನೀ ಸಾಗು 
ನಿನ್ನ ನಂಬಿದವರಿಗೆ ನೀ ನೆರಳಾಗು

0439ಎಎಂ03112022
*ಅಮುಭಾವಜೀವಿ ಮುಸ್ಟೂರು* #ಅಮುಭಾವರಸಾಯನ43

ತಿರಸ್ಕಾರಕ್ಕೆ ಕುಗ್ಗದಿರು
ಪುರಸ್ಕಾರಕ್ಕದು ಮೊದಲ ಮೆಟ್ಟಿಲು
ಅವಹೇಳನಕ್ಕೆ ಅಂಜದಿರು
ಅಭಿಮಾನಕ್ಕೆ ಅದೇ ತೊಟ್ಟಿಲು 
ಅವಮಾನಕ್ಕೆ  ಅಧೀರನಾಗದಿರು
ಅವಕಾಶಕೆ ಅದುವೇ ಬೆಂಬಲ

#ಅಮುಭಾವರಸಾಯನ43 ತಿರಸ್ಕಾರಕ್ಕೆ ಕುಗ್ಗದಿರು ಪುರಸ್ಕಾರಕ್ಕದು ಮೊದಲ ಮೆಟ್ಟಿಲು ಅವಹೇಳನಕ್ಕೆ ಅಂಜದಿರು ಅಭಿಮಾನಕ್ಕೆ ಅದೇ ತೊಟ್ಟಿಲು ಅವಮಾನಕ್ಕೆ ಅಧೀರನಾಗದಿರು ಅವಕಾಶಕೆ ಅದುವೇ ಬೆಂಬಲ #Collab #YourQuoteAndMine #collabwithjogi #yqkannada #yqjogi

7a31a45bf4b8e663702e0feb93df9c8c

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ಗಜಲ್ 
04:40:00
ಹಾದಿ ಬೀದಿಯಲ್ಲಿ ಸದ್ಯ ಹೆಸರು ಚಾಲ್ತಿಯಲ್ಲಿದೆ ಗೆಳೆಯ
ಯೌವ್ವನ ತುಂಬಿದ ಮೈಯಿದು ಮಾರಾಟಕ್ಕಿದೆ ಗೆಳೆಯ

ಹರೆಯದ  ಹೊಸ್ತಿಲ್ಲಲ್ಲಿ ಮುತ್ತು ಕಟ್ಟಿ ಬೀದಿಗೆ ಬಿಟ್ಟರು
ಊರ ಸಿರಿವಂತರ ಕಾಮ ತೀಟೆಗೆ ಬಲಿಯಾದೆ ಗೆಳೆಯ

ದೇವರ ಹೆಸರಲ್ಲಿ ಈ ದಂಧೆಗೆ ತಳ್ಳಿ ಸುಖಿಸಿದರು
ಊರವರೆಲ್ಲ ಉಂಡು ಬಿಸಾಡಿದ ಎಲೆಯಾದೆ ಗೆಳೆಯ

ನನ್ನವ್ವನು ಹೀಗೆ ಗಂಡ ಯಾರೆಂದು ಗೊತ್ತಿಲ್ಲದೆ ಹಡೆದಳು
ಅಪ್ಪ ಇಲ್ಲದ ನಾನು  ತುಪ್ಪಕೆ ಜಾರಿ ರೊಟ್ಟಿಯಾದೆ ಗೆಳೆಯ

ಕಾಮದ ಮದವೇರಿದವರಾರು ಅಂದು ಕರುಣೆ ತೋರಲಿಲ್ಲ *ಅಮು*
ಕಾಯದ ಮೇಲಿನ ಒಂದೊಂದು ಕಲೆ ವ್ಯಥೆಯ ಕುರುಹಾಗಿದೆ ಗೆಳೆಯ

04:56:02ಎಎಂ25102022
*ಅಮುಭಾವಜೀವಿ ಮುಸ್ಟೂರು* #ಅಮುಭಾವರಸಾಯನ 42

ಗಜಲ್ 
04:40:00
ಹಾದಿ ಬೀದಿಯಲ್ಲಿ ಸದ್ಯ ಹೆಸರು ಚಾಲ್ತಿಯಲ್ಲಿದೆ ಗೆಳೆಯ
ಯೌವ್ವನ ತುಂಬಿದ ಮೈಯಿದು ಮಾರಾಟಕ್ಕಿದೆ ಗೆಳೆಯ

ಹರೆಯದ  ಹೊಸ್ತಿಲ್ಲಲ್ಲಿ ಮುತ್ತು ಕಟ್ಟಿ ಬೀದಿಗೆ ಬಿಟ್ಟರು

#ಅಮುಭಾವರಸಾಯನ 42 ಗಜಲ್ 04:40:00 ಹಾದಿ ಬೀದಿಯಲ್ಲಿ ಸದ್ಯ ಹೆಸರು ಚಾಲ್ತಿಯಲ್ಲಿದೆ ಗೆಳೆಯ ಯೌವ್ವನ ತುಂಬಿದ ಮೈಯಿದು ಮಾರಾಟಕ್ಕಿದೆ ಗೆಳೆಯ ಹರೆಯದ ಹೊಸ್ತಿಲ್ಲಲ್ಲಿ ಮುತ್ತು ಕಟ್ಟಿ ಬೀದಿಗೆ ಬಿಟ್ಟರು

loader
Home
Explore
Events
Notification
Profile