Nojoto: Largest Storytelling Platform
darshaboss5381
  • 40Stories
  • 290Followers
  • 676Love
    64.8LacViews

darsha boss

writing is my Heart

  • Popular
  • Latest
  • Video
6c6e983c34d66dcc35eaded56f383def

darsha boss

ನಡೆದಿರುವುದೆಲ್ಲವೂ ನಿನ್ನಿಂದಲೇ
ನಡೆಯುತಿರುವುದೆಲ್ಲವೂ ನಿನ್ನಿಂದಲೇ
ಮುಂದೆ ನಡೆಯುವುದೆಲ್ಲವೂ ನಿನ್ನಿಂದಲೇ
ನೀ ತೋರುವ ದಾರಿಯಲ್ಲಿ ನಡೆಯುವ ಪಯಣಿಗ ನಾನು
ಹೇಗಾದರೂ ನಡೆಸು ಎಲ್ಲಿಗಾದರೂ ನಡೆಸು
ಎಲ್ಲವೂ ನಿನ್ನದೇ ಶ್ರೀ ವೈದ್ಯನಾಥೇಶ್ವರನೇ....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss
  #Gurupurnima god#lord#prayer

#Gurupurnima godlordprayer #Memes

6c6e983c34d66dcc35eaded56f383def

darsha boss

#Hope ಕನ್ನಡ ರಾಜ್ಯೋತ್ಸವದ ಶುಭಾಶಯಗಳು #ಕನ್ನಡ #ಕವಿತೆ #ಮನಸ್ಸು #ಪ್ರೇರಕ

#Hope ಕನ್ನಡ ರಾಜ್ಯೋತ್ಸವದ ಶುಭಾಶಯಗಳು #ಕನ್ನಡ #ಕವಿತೆ #ಮನಸ್ಸು #ಪ್ರೇರಕ #Knowledge

6c6e983c34d66dcc35eaded56f383def

darsha boss

ಬದುಕು ಮನುಜ ನೀ
ನಿನ್ನ ಮನವರಿಯುವ ಮೊದಲು
ಬೆರಗುಗೊಳಿಸುವ ಬಣ್ಣಗಳ ಅರಿತು
ನಕಲಿ ಬಣ್ಣಗಳ ಮುಂದೆ
ನಿನ್ನ ಸದ್ಗುಣ ಭಾವನೆಗಳಿಗೆ ಬೆಲೆ ಇಲ್ಲ 
ಮಾತಿನಲ್ಲಿ ಮಂತ್ರವನ್ನು ಹೇಳು 
ಅಂತರಾಳದಲ್ಲಿ ಕುತಂತ್ರವನ್ನು ಮಾಡು
ಮೂಢ ಜನರು ಮೆಚ್ಚುವರಯ್ಯ
ನೀ ಸರ್ವ ಶ್ರೇಷ್ಠ ನೆಂದು....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss #WoNazar
6c6e983c34d66dcc35eaded56f383def

darsha boss

ಸೋಲಿರಲಿ ಗೆಲುವಿರಲಿ
ಎಲ್ಲದರಲ್ಲೂ ನೀ ಇರುವೆ ಅಮ್ಮ
ಸೋತಾಗ ಸನಿಹ ಬಂದು ಶಕ್ತಿ ನೀಡುವೆ
ಗೆದ್ದಾಗ ಗೆಲುವಿನ ಸಂಭ್ರಮ ನೀನಾಗುವೆ
ಜಗನ್ಮಾತೆ ಶ್ರೀ ಮುಳಕಟ್ಟಮ್ಮ ದೇವಿ....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss
  #KarwachauthFast
6c6e983c34d66dcc35eaded56f383def

darsha boss

ಮನಸ್ಸಿನಲ್ಲಿ ಬೆಟ್ಟದಷ್ಟು ಪ್ರೀತಿ ಇದ್ದರೂ
ಹೊರಗಿನಿಂದ ಒರಟನಾದವನು ಅಪ್ಪ...
ತಾನು ದುಡಿಯಬೇಕು ನನಗಾಗಿ ಅಲ್ಲ
ತನ್ನ ಕೂಸಿನ ಭವಿಷ್ಯಕ್ಕಾಗಿ ಎನ್ನುವವನು ಅಪ್ಪ...
ಮಗನ ಬದುಕಿಗೆ ಪೂರಕ ಕನಸುಗಳ ಕಂಡು
ನನಸಾಗಿಸಲು ನಿತ್ಯವೂ ಶ್ರಮಿಸುವನು ಅಪ್ಪ...

Happy Father's Day 

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss #FathersDay
6c6e983c34d66dcc35eaded56f383def

darsha boss

ನಿನ್ನ ಕನಸುಗಳ ಕಾಯುವ
ಕಾವಲುಗಾರ ನಾನು 
ಕೋರಿಕೆ ಮಾಡುವೆನು
ನೀ ಆಗಮಿಸು ಬಾ
ನನ್ನೆದೆಯ ಕೋಟೆಗೆ....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss #candle
6c6e983c34d66dcc35eaded56f383def

darsha boss

ಮನಸ್ಸಿನಿಂದ ನೆನೆದರೆ ಸಾಕು 
ಕರುಣಿಸಿ ಕಾಯಲು ನೀನಿರುವಾಗ
ಎನಗೆ ಭಯವಿನೇನು ತಂದೆ
ಶ್ರೀ ವೈದ್ಯನಾಥೇಶ್ವರನೇ.....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss
  #RAMADAAN
6c6e983c34d66dcc35eaded56f383def

darsha boss

ಕನಸುಗಳು ಕಾಡುತ್ತಿವೆ
ನಿನ್ನ ಮನಸ್ಸಿನ ಜೊತೆ ಬೆರೆಯಲು
ನೀನೆನಗೆ ಒಲಿದು ಬಾ
ನಿನ್ನ ಮುಂಗೋಪವನು ತೊರೆದು....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss #cycle #ಲವ್
6c6e983c34d66dcc35eaded56f383def

darsha boss

ಕೋಪಿಸುವ ಮಲ್ಲಿಗೆಗೆ
ಮನವಿ ಮಾಡುವೆ ನಾ
ಅರೆಕ್ಷಣನು ಮುನಿಸದಿರು ಮಲ್ಲಿಗೆಯೇ
ನಾ ನಿನ್ನ ಮುದ್ದಿಸುವೆ 
ನನ್ನೆದೆ ಅಂತರಾಳದಿಂದ.....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss #WelcomLife #Li
6c6e983c34d66dcc35eaded56f383def

darsha boss

ಶರಣೆನ್ನ ಬೇಕಯ್ಯ
ಶರಣೆನ್ನ ಬೇಕಯ್ಯ
ಶ್ರೀ ವೈದ್ಯನಾಥೇಶ್ವರನ ನೆನೆದು
ಕ್ಷಣ ಕ್ಷಣಕ್ಕೂ ಶರಣೆನ್ನ ಬೇಕಯ್ಯ
ಶರಣೆಂದು ನಡೆದರೆ
ನಡೆವ ದಾರಿ ಉದ್ದಕ್ಕೂ
ಹೂವ ಸುರಿಸುವನಯ್ಯ
ಶ್ರೀ ವೈದ್ಯನಾಥೇಶ್ವರನು......

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss
  #Sawankamahina #lord
loader
Home
Explore
Events
Notification
Profile