Nojoto: Largest Storytelling Platform

*ಭಾವಯಾನ* ಅಂತರಗದಲಿ ಅರಳಿದ ಭಾವಕೆ ಭಾಷೆಯ ರೂಪ ಕೊಡುವಾಸೆ

*ಭಾವಯಾನ*

ಅಂತರಗದಲಿ ಅರಳಿದ ಭಾವಕೆ
ಭಾಷೆಯ ರೂಪ ಕೊಡುವಾಸೆ
ಭಾವನೆಗಳಿಗೆ ರೆಕ್ಕೆ ಹಚ್ಚಿ
ಬಾನಲಿ ಹಾರಿ ಬಿಡುವಾಸೆ..

ತರಂಗಳ ನಾದದಲಿ
ತಾನನ ಹೇಳುವಾಸೆ
ನಾಕು ತಂತಿಯ ವೀಣೆಗೆ
ನಾಲ್ಕು ಪದಗಳ ಹೆಣೆವಾಸೆ..

ಒಡಲೊಳಗೆ ಅಡಗಿದ ಬೆಚ್ಚನೆಯ
ಭಾವಗಳ ಬದುಕಿನೊಂದಿಗೆ ಬೆರೆಸಿ
ಪರಿಚಯಿಸುವ ಹಂಬಲ
ನನ್ನ ಭಾವಯಾನ ದೊಂದಿಗೆ

ಉಸಿರುಗಟ್ಟಿಸವ ನೋವಿಗೆ
ಹುಬ್ಬೇರಿಸುವ ಅಚ್ಚರಿಗೆ
ಮುನಿಸ ತೋರುವ ಕಾರ್ಮೋಡಕೆ
ನನ್ನೆಲ್ಲ ಮನದ ಕಾಮನೆಗೆ 
ಹೊರಟಿಹೆ ಭಾವಯಾನದ ಬೆನ್ನೇರಿ
ಹರಸಿರಿ ನಿಮ್ಮವನ ಕರುಣೆ ತೋರಿ.

ಅನಪು
ಅರವಿಂದ್ ಎನ್ ಪಿ
9972184591 #kannadaquotes #kavana #lovequotes #inspirationalquotes #kannadadubsmash #kannadalove
*ಭಾವಯಾನ*

ಅಂತರಗದಲಿ ಅರಳಿದ ಭಾವಕೆ
ಭಾಷೆಯ ರೂಪ ಕೊಡುವಾಸೆ
ಭಾವನೆಗಳಿಗೆ ರೆಕ್ಕೆ ಹಚ್ಚಿ
ಬಾನಲಿ ಹಾರಿ ಬಿಡುವಾಸೆ..

ತರಂಗಳ ನಾದದಲಿ
ತಾನನ ಹೇಳುವಾಸೆ
ನಾಕು ತಂತಿಯ ವೀಣೆಗೆ
ನಾಲ್ಕು ಪದಗಳ ಹೆಣೆವಾಸೆ..

ಒಡಲೊಳಗೆ ಅಡಗಿದ ಬೆಚ್ಚನೆಯ
ಭಾವಗಳ ಬದುಕಿನೊಂದಿಗೆ ಬೆರೆಸಿ
ಪರಿಚಯಿಸುವ ಹಂಬಲ
ನನ್ನ ಭಾವಯಾನ ದೊಂದಿಗೆ

ಉಸಿರುಗಟ್ಟಿಸವ ನೋವಿಗೆ
ಹುಬ್ಬೇರಿಸುವ ಅಚ್ಚರಿಗೆ
ಮುನಿಸ ತೋರುವ ಕಾರ್ಮೋಡಕೆ
ನನ್ನೆಲ್ಲ ಮನದ ಕಾಮನೆಗೆ 
ಹೊರಟಿಹೆ ಭಾವಯಾನದ ಬೆನ್ನೇರಿ
ಹರಸಿರಿ ನಿಮ್ಮವನ ಕರುಣೆ ತೋರಿ.

ಅನಪು
ಅರವಿಂದ್ ಎನ್ ಪಿ
9972184591 #kannadaquotes #kavana #lovequotes #inspirationalquotes #kannadadubsmash #kannadalove
draravindnp1675

Dr Anapu

New Creator