ಸ್ನೇಹವೆಂಬ ಹೂದೋಟದಲಿ ನನಗೆ ಸಿಕ್ಕ ಅತೀ ಶ್ರೇಷ್ಠ ಹೂಗಳು ನೀವು🌹 ಅತ್ತರೆ ಕಣ್ಣೊರೆಸುವ ತಾಯಿಯಾದೆ ನಕ್ಕರೆ ಮುದ್ದಿಸುವ ತಂದೆಯಾದೆ ತಪ್ಪು ಮಾಡಿದರೆ ತಿದ್ದಿ ಹೇಳುವ ಅಣ್ಣನಾದೆ ಸಲುಗೆ ತುಂಬಿದ ಪ್ರೀತಿಯ ತೋರುವ ಅಕ್ಕನಾದೆ ಕೀಟಲೆ ಮಾಡುವ ಮುದ್ದು ತಂಗಿಯಾದೆ ನಕ್ಕು ನಲಿಸುವ ತುಂಟ ತಮ್ಮನಾದೆ ಬೇಡಿದ ವರವ ಕರುಣಿಸೋ ದೈವವಾದೆ ಪುಟ್ಟ ಕಂದಮ್ಮನಂತೆ ನನ್ನ ಬೇಕು ಬೇಡ ಎಲ್ಲವನ್ನು ತೀರಿಸುವ ಸಕಲ ಬಂಧುವು ನೀನಾದೆ.. ಹೇಳಲೇನಿಲ್ಲ ಮಾತಿನಲಿ ನೀನೇ ಬೆರೆತು ಹೋಗಿರುವೆ ಜೀವದ ಕಣ ಕಣದಲ್ಲಿ.. ಹೃದಯ ದೇಗುಲದಲ್ಲಿ ದೇವರಂತೆ ಪೂಜಿಸುವೆ ನಿನ್ನ ಕೈಬಿಡದೆ ಕಾಪಾಡು ನಿನ್ನ ಮುದ್ದು ಸ್ನೇಹಿತೆಯನ್ನ.. ಈ ಉಸಿರು ನಿನಗಾಗಿಯೇ ನಿನ್ನ ಸ್ನೇಹದೊಲವ ಪೂಜೆಗಾಗೇ ಸಮರ್ಪಿತವಿನ್ನ 😍❤️ ನನ್ನ ೭೦೦ನೇ ಬರಹ ಸ್ನೇಹದ ಸವಿನೆನಪಿಗಾಗಿ ನನ್ನೆಲ್ಲ ಸ್ನೇಹಿತರಿಗೆ ಮೀಸಲು.. ಅರಿವಾಗದೇ ಶುರುವಾದ ಸ್ನೇಹವಿದು ಶಾಶ್ವತವಾಗಿ ಉಳಿಯಲಿ.. ಸ್ನೇಹ ಲೋಕದಲ್ಲಿ ನನಗೆ ಸಿಕ್ಕ ಅನರ್ಘ್ಯ ರತ್ನಗಳು ನೀವೆಲ್ಲ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹಕೆ ನಾನೆಂದಿಗೂ ಚಿರಋಣಿ.. ತಿಳಿದೋ ತಿಳಿಯದೆಯೋ ಎಂದಾದರೂ ನಿಮ್ಮ ಮನನೋಯಿಸಿದ್ದರೆ ಮನ್ನಿಸಿ 🙏 Love you All ♥️💐 #yqjogi #yqkannada #yqfriendsforever #friendship #friendsonline #friendsareblessings #friendship_vibes #friendsforlifetime