ಏ ಮನವೆ ನಂದೇನು ತಪ್ಪಿದೆ ಚಾಲನೆ ನೀಡಿದ್ದು ನೀನಲ್ಲವೆ ಆ ಪ್ರೇಮ ಸಂಭಾಷಣೆಗೆ ಈಗ ಈ ಬಿನ್ನಹದ ಮಾತೇಕೆ ಗತ್ತಿನಿಂದ ಗರಿಬಿಚ್ಚಿ ಹಾರಿದೆಯಲ್ಲ ಕಣ್ಮುಂದೆ ಸುಳಿಯುತೆಯಲ್ಲ ನಿನ್ನ ಮೌನವನ್ನು ನಾನು ಮೌನದಲ್ಲೇ ಪ್ರಶ್ನಿಸುವೆ. ಚಿತ್ತ ನಿನ್ನಲ್ಲಿರುವಾಗ ಎತ್ತ ಸಾಗಲಿ ನಾ ದೂರ ನಿನ್ನ ಪುಟ್ಟ ಹೃದಯಾನೇ ನಾವಿರುವ ನಗುವಿನೂರ. ಸವಿ ಜೇನಿನ ಸಿಹಿಯಂತೆ ನಿನ್ನ ಅನುರಾಗವು ನಾ ಪಡೆದೆ ಅದು ಅನುಗಾಲವು ಉಳಿಯುವಂತೆ ಚಿರಕಾಲವೂ ಮೇಳೈಸುವಂತೆ ನನ್ನಲ್ಲೆ.. ಪ್ರೇಮ ಬರಹದ ಈ ಪದಗಳಿಗೆ ಅಕ್ಕರೆಯ ಒಲ್ವ ನೀಡಿದು ನಕ್ಕರೆ ಸಕ್ಕರೆಯ ಸವಿದಂತೆ ನೋಡುತಾ ಜಗವನ್ನೇ ನಾ ಮರೆತಂತೆ.. ಹಾಗೇ ಸುಮ್ಮನೆ #priyankabillur #ಬನಹಟ್ಟಿ #ಉತ್ತರಕರ್ನಾಟಕ #ಉತ್ತರಕರ್ನಾಟಕಮಂದಿ #ಕನ್ನಡತಿ #ನೋವು #ನನ್ನವರು #YourQuoteAndMine Collaborating with ಪ್ರಿಯಾಂಕಾ ಬಿಳ್ಳೂರ