ಒಮ್ಮೊಮ್ಮೆ ನಮಗೆಲ್ಲ ಇದ್ದರೂ ಯಾರು ಇಲ್ಲವೆಂಬಷ್ಟು ಮನವು ನೊಂದು ಹೋಗಿರುತ್ತದೆ..! ಗಾಯದ ಮೇಲೆ ಉಪ್ಪು ಹಾಕಿದಂತೆ ಜೀವನವಿದು ಕೆದಕಿ ಕೆದಕಿ ಮತ್ತಷ್ಟು ಮಗದಷ್ಟು ನೋವ ನೀಡುತ್ತಲೇ ಇರುತ್ತದೆ..! ದೇವರಿಗೂ ಕರುಣೆ ಬಾರದೇನೋ ನೊಂದ ಜೀವಕ್ಕೆ ಮೇಲಿಂದ ಮೇಲೆ ನೋವ ನೀಡಿ ಜೀವವ ಹಿಂಡುತ್ತದೆ..! ಯಾರ ಶಾಪವೋ ನಾವು ಮಾಡಿದ ಪಾಪವೋ ಅತ್ತು ಅತ್ತು ಮನವಿದು ಕುಗ್ಗಿ ಹೋಗುತಲಿದೆ ಕಷ್ಟಗಳು ಸಹಿಸಲಾಗದಷ್ಟು ಜೀವ ನೊಂದು ಬೆಂದು ಬಸವಳಿದು ಹೋಗಿದೆ 😔 ಒಂಟಿ ಮೋಡದ ಕಣ್ಣ ಹನಿಯದು ನಮಗೆ ಮಳೆಯೆಂದೇ ಭಾಸವಾಗುವುದು..! ನೋವಿನಾಳವೇನೆಂದು ಮೋಡದ ಮರೆಯಲ್ಲಿ ಅಡಗಿಹ ನೊಂದ ಮನಕಷ್ಟೇ ಅರಿವಿರುವುದು 😔 #ranjuಗೊಂಬೆ_ಹಿತನುಡಿಗಳು #yqjogi #yqkannada #hurtedheart #painfulllife #cryingalone #paincontinued #strugglesofsoul