ಓದಬೇಕು ಮನುಜ ಓದಬೇಕು ಮನಸಿಟ್ಟು ಓದಬೇಕು ಮನುಷ್ಯನಾಗಬೇಕು || ಓದೋದು ಇಲ್ಲದೆ ಊದಾಕ ಹೋಗಬೇಡ ಊದಿದ್ದು ನೀ ಅರಿಯದೆ ತಿಳಿದಿದ್ದು ತಿಳಿಲಾರದದ್ದು ತಿಳಿನೀರಹಾಂಗ ನಿಂತಾದ ತಾಳಿ ನೋಡು ಮನವೆ ಓದಿನೋಡು ಜಗದೊಳಗ ಜೋಡಿಯಾಗುವ ಮುನ್ನ ಜಪ್ಪಿಲೇ ಕುಂತು ಓದಿನೋಡು ಜಪ್ಪಂತ ಜಪವ ಮಾಡ್ಯಾನ ಮನದಾಗ ಜಡಿದೆಬ್ಬಿಸು ನಿನ್ನ ಮನವ ಜಗಕೆ ಬೆಳಕಾಗಲು ಜಡಿ ನಿನ್ನ ಆಸೆ ಆಮಿಷಗಳನ್ನು ಜೊತೆಯಾಗು ಜಾತಿ ಮತವ ಮೀರಿ ಅಂತರಮುಖಿಯಾಗು ನೀ ಅಂತರಂಗದೊಳಗ ಒಂದಾಗು ಅಂತರವ ಬಿಟ್ಟು ತರ ತರದಿ ಓದುವಂತವನಾಗು ತಾರೆಯಾಗು ತಾಯಿಯ ಮಗುವಾಗು ಶರಣಾಗು ನೀ ಶಾರದಾಂಬೆಗೆ... ಕವನ : ಓದು ಮಾನವನಿಂದ ಮಾನವೀಯತೆಯೆಡೆಗಿನ ಹಾದಿ!! #ಓದು #ಕನ್ನಡಕವಿತೆ #yqreaders #yqkannada #yqjogi_kannada