ಬೆಂಗ್ಳೂರಗೆ ನಮ್ಮ ಕುಂದಾಪ್ರ ಕನ್ನಡ ಯಾರದ್ದರು ಬಾಯೆಗ್ ಕೇಂಡ್ರ ಸಯ್ಯ್ ನಾವ್ ಮೊದಲ ಮುಂಚ್ ಕೆಂಬುದೇ ಕುಂದಾಪ್ರವೇ, ಊರಗ್ ಎಲ್ಲ ನಿಮದ್ ಅಂದೇಳಿ. ಬೆಂಗ್ಳೂರಗೆ ನಮ್ಮ ಕುಂದಾಪ್ರ ಕನ್ನಡ ಯಾರದ್ದರು ಬಾಯೆಗ್ ಕೇಂಡ್ರ ಸಯ್ಯ್ ನಾವ್ ಮೊದಲ ಮುಂಚ್ ಕೆಂಬುದೇ ಕುಂದಾಪ್ರವೇ, ಊರಗ್ ಎಲ್ಲ ನಿಮದ್ ಅಂದೇಳಿ. ನಮ್ಮನ ಪರ ಊರನ್ಗೆ ಕಂಡ್ ಹಿಡುದ್ ಬಾರಿ ಸೋಬಿ, ನಾವ ಹಾಕು ಬಟ್ಟೆನ್ಗ್ ಅಲ್ಲ ನಮ್ಮನ್ ಕಂಡ್ ಹಿಡುದ್ ನಾವ್ ಆಡು ಬಾಷಿಯಂಗೆ ನಮ್ಮನ್ ಕಂಡ್ ಹಿಡಿತ್ರ. ಪರೂರಗೆ ನಮ್ಮೂರ ಬಾಷಿ ಕೆಂಡ್ರ್ ಕೂಡ್ಲೆ ಒಂದ್ ಖುಷಿ ಆಪದ್ ಸಾಮನಿಕ್ ಎನ್ ಅಲ್ಲ. ಅದ್ರಗು ನಂಗ್ ಅಂತೂ ಮಾತ್ ಮಸ್ತ್ ಆಡಕ್. ಉಣದೆ ಆರು ಆಯಿಕಂಬಿ ಮಾತಾಡದೆ ಆಯಿಕಂಬುಕ್ ನನ್ ಹತ್ರ ಎಡಿಯ. ಹಾಂಗ್ ಆಪುಕ್ ಹೊಯ್ ಎಲ್ಲ್ ಕುಂದಾಪ್ರ ಕನ್ನಡ ಮಾತಾಡುವರ ಸಿಕ್ತ್ರ ಅಂದಳೇ ಕಾಂತಿರತಿ. ಬೆಂಗ್ಳೂರಗೆ ಹೆಚ್ಚಿನ ಹೋಟೆಲ್, ಬೇಕರಿ ಕಾಂಡಿಮೆಂಟ್ಸ್ ಇಪ್ಪುದ ಊರರದ್ದೇ. ಅದು ಊರರದ್ದೇ ಅಂದಳೇ ಕಂಡ ಹಿಡುಕ್ ಸುಲಭದ ಉಪಾಯ ಅಂದ್ರೆ ಒಂದೇ ಹೆಸರ ಶ್ರೀ ಬ್ರಹ್ಮಲಿಂಗೇಶ್ವರ, ಕುಲದೇವತೆ ಪ್ರಸನ್ನ, ದುರ್ಗಾಪರಮೇಶ್ವರಿ ಅಂತಿರತ್ ಇಲ್ಲಾ ಮಾರಣಕಟ್ಟೆ ಕೊಲ್ಲೂರ, ಆನೆಗುಡ್ಡೆ, ಮಂದಾರ್ತಿ, ಕಮಲಶಿಲೆ ಅಥವಾ ಯಕ್ಷಗಾನದ ಫೋಟೋ ಒಂದಾರು ಇರತ್ ಅದ ಇದ್ರ ಮೇಲೆ ಅದ ಪಕ್ಕ ಊರರದ್ದೇ ಯಾರದ್ದೋ ಅಂದೇಳಿ. ಊರರದ್ ಅಂದೇಳಿ ಅನ್ಸರ್ ಮೇಲೆ ಮನ್ಸಗೆ ಒಂದನುಮ್ನಿ ಕುಶಿ ಆತ್ ಕಾಣಿ. ನಮ್ಮ ಊರ ದೇವರ ಫೋಟೋ ಕಂಡ್ರೆ ಸೈ ನನಗಂತೂ ಊರಗೆ ಇದ್ದೆ ದೇವಸ್ಥಾನಕ್ಕೆ ಹೋಯಿ ಕಂಡಸ್ಟ ಕುಶಿ ಆಪದ.