ಕಣ್ಮನ ಸೆಳೆವ ಭ್ರಮರದಂತೆ, ಈ ಹೂವಿಗೆ ಸದಾ ನಿನ್ನದೇ ಚಿಂತೆ.. ಬಾ ಸೇರಿಬಿಡು ಈ ತೋಳಲಿ ಒಮ್ಮೆ ನದಿ ಸಾಗರ ಬೆರೆತಂತೆ.. ನಾಚುತಿರಲು ನಾ ನವಿಲಿನಂತೆ, ನಿನ್ನ ಸುಂದರ ನಯನಗಳೇ, ದೃಷ್ಟಿ ಬೊಟ್ಟಾಗಿವೆಯಂತೆ.. ಈ ಸುಂದರ ಹೂನಗೆಗೆ ಕಾರಣ ನೀನಂತೆ, ಗಲ್ಲದ ಮೇಲಿನ ಕೆಂಪನೆಯ ಹೊಂಬೆಳಕಿಗೂ, ನಿನದೆ ಸವಿ ನೆನಪು ಎಡಬಿಡದೆ ಕಾಡಿದೆಯಂತೆ.. ತುಟಿಯಂಚಲಿ ನಗು ಸೂಸಿದೆ ಕೆಂದಾವರೆಯಂತೆ, ಮನಸು ಅರಳಿ ಕಂಪ ಸೂಸಿದೆ, ನೀಲಾಕಾಶದಲಿ ನಾವಿಬ್ಬರು ಧ್ರುವ ತಾರೆಗಳಾದಂತೆ.. ❤️ ಒಲವ ಸಂದೇಶ #love #couples #madeforeachother #happiness #everloved #longlasting #loveforlife #togetherforever