ಎದ್ದೇಳೆ ಅಮ್ಮ ಮರಳಿ ಬರಬಾರದೆ ಮಗಳ ಮಡಿಲಿಗೆ ಮುತ್ತನಿತ್ತು ತುತ್ತು ನೀಡಲು. ಹೊತ್ತಿಲ್ಲ ಗೊತ್ತಿಲ್ಲ ಸಾಕಿ ಸಲಹಿದೆ ತುತ್ತು ಕೂಳಿರದ ಕಾಲದಲಿ ಹೊಟ್ಟೆ ತುಂಬಿಸಿ ಸಲಹಿದೆ. ಮೂಳೆ ಮಾಂಸದ ಮುದ್ದೆಯಲಿ ಉಸಿರು ಬಿಗಿಹಿಡಿದು ಜೀವ ನೀಡಿರುವೆ ಇಂದೇಕೆ ಸದ್ದಿಲ್ಲದೇ ಮಲಗಿರುವೆ ಏಳು ಎದ್ದೇಳು ಹಸಿವಾಗಿದೆ ತುತ್ತು ನೀಡು ಏಳವ್ವ. ಕಂಬನಿ ಸುರಿಸಲೆಷ್ಟು ಎಷ್ಟು ಕೂಗಿ ಕರೆಯಲಿ ಹೇಳು ಮುನಿಸೇ ನನ ಮೇಲೆ. ಯಾಕವ್ವ ಸುಸ್ತಾಯಿತೆ ಮಲಗಿಕೊ ನೆಮ್ಮದಿಯಾಗಿ ಕಾಯುವೆ ನಿನಗಾಗಿ ಎಚ್ಚರವಾಗಿ ಮಾತಾಡುವೆ ತಾನೇ.😔😊 ಡಾ.ಅನಪು Mom #ಅಮ್ಮನಮಡಿಲು #ಅಮ್ಮನಪ್ರೀತಿ #yqkannada #knnadaquotes